
ವಿಮಾನ ನಿಲ್ದಾಣದಲ್ಲಿ ಬೆಂಕಿ
ತಾನು ಒಂದು ಬಗೆದರೆ ದೈವ ಒಂದು ಬಗೆಯುವುದು ಎಂಬ ಮಾತು ಪಾಕಿಸ್ತಾನದ ಪಾಲಿಗೆ ಅಕ್ಷರಶ ಸತ್ಯವಾಗಿದೆ. ಉಗ್ರರನ್ನು ತಯಾರು ಮಾಡುವ ಖಾರ್ಕಾನೆ ಯಾಗಿರುವ ಪಾಕಿಸ್ತಾನ ದೇಶವು ಅದೇ ಉಗ್ರರನ್ನು ಪ್ರಚೋದಿಸಿ ಕಾಶ್ಮಿರದ Pahalgam ಮೇಲೆ ದಾಳಿ ಮಾಡಿಸಿ ಅನೇಕ ಹಿಂದುಗಳ ಮಾರಣ ಹೋಮಕ್ಕೆ ಕಾರಣ ಕತೃಗಳಾಗಿದ್ದಾರೆ ಮತ್ತು ಆ ದಾಳಿಯನ್ನು ಸಮರ್ಥಿಕೊಳ್ಳುತ್ತಿರುವ ಸಂದರ್ಭದಲ್ಲಿ ಈ ಅಗ್ನಿ ಅವಘಡವಾಗಿರುವುದು ಪಾಕಿಸ್ತಾಕ್ಕೆ ಹಿನ್ನಡೆ ಉಂಟುಮಾಡಿದೆ.

ವಿವರ: Allama Iqbal International Airport ಇದು ಇರುವುದು ಪಾಕಿಸ್ತಾನದ ಲಾಹೋರ್ನಲ್ಲಿ ಇಲ್ಲಿಯೆ ಭಾರಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಎಲ್ಲಾ ವಿಮಾನ ಸಂಚಾರ ರದ್ದಾಗಿದೆ. ಮೂಲಗಳು ವರದಿ ಪ್ರಕಾರ ಪಾಕಿಸ್ತಾನ ಸೇನೆಯ ವಿಮಾನವೊಂದು ಲ್ಯಾಂಡಿಂಗ್ ಆಗುವ ಸಂದರ್ಭದಲ್ಲಿ ಅವುಗಳ ಟೈರ್ಗೆ ಬೆಂಕಿ ಹೊತ್ತಿಕೊಂಡಾಗ ಬೆಂಕಿ ಕಾಣಿಸಿಕೊಂಡಿದೆ ಎಂದು ತಿಳಿದು ಬಂದಿದೆ. ಬೆಂಕಿಯನ್ನು ನಂದಿಸಲು ತಕ್ಷಣವೇ ಅಲ್ಲಾಮಾ ಇಕ್ಬಾಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಗ್ನಿಶಾಮಕ ದಳದ ವಾಹನಗಳು ದೌಡಾಯಿಸಿದವು. ಬೆಂಕಿ ಕಾಣಿಸಿಕೊಂಡ ಪರಿಣಾಮವಾಗಿ, ರನ್ವೇಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.
- ಲಾಹೋರ್ನ ಅಲ್ಲಾಮಾ ಇಕ್ಬಾಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ಬೆಂಕಿಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಈ ವಿಡಿಯೋದಲ್ಲಿ, ವಿಮಾನ ನಿಲ್ದಾಣದಲ್ಲಿ ಇದ್ದ ಜನರು ಹೊಗೆಯಿಂದಾಗಿ ಹೇಗೆ ಕಷ್ಟಪಡುತ್ತಿದ್ದಾರೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. 32 ಸೆಕೆಂಡುಗಳ ವೀಡಿಯೊದಲ್ಲಿ, ಪ್ರಯಾಣಿಕರು ಘಟನೆಯ ಬಗ್ಗೆ ಚರ್ಚಿಸುತ್ತಿರುವಾಗ ನಿರಂತರವಾಗಿ ಕಪ್ಪು ಹೊಗೆ ಮೇಲೇರುತ್ತಿದೆ. ಆದಾಗ್ಯೂ, ಯಾವುದೇ ಸಾವುನೋವುಗಳು ಅಥವಾ ಗಮನಾರ್ಹ ಹಾನಿಯ ವರದಿಗಳು ಬಂದಿಲ್ಲ.
- ಇಂತಹ ಘಟನೆ ಪಾಕಿಸ್ತಾನಿಗಳಿಗೆ ಹೊಸದೆನಲ್ಲ: ಪಾಕಿಸ್ತಾನದ ಅಲ್ಲಾಮಾ ಇಕ್ಬಾಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಂಕಿ ಸಂಭವಿಸಿರುವುದು ಮೊದಲ ಘಟನೆ ಅಲ್ಲ. ಹಿಂದೆ ಅನೇಕ ಬಾರಿ ವಿಮಾನ ನಿಲ್ಡಾಣಗಳಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ವರದಿಯಾಗಿವೆ, ಇದು ದೇಶದ ಕಳಪೆ ಮೂಲಸೌಕರ್ಯ ಮತ್ತು ಭದ್ರತಾ ಮಾನದಂಡಗಳ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತದೆ. ಕಳೆದ ವರ್ಷ ಅಂದರೆ 2024ರ may 9 ರಂದು, ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಲಾಹೋರ್ ವಿಮಾನ ನಿಲ್ದಾಣದ ವಲಸೆ ಕೌಂಟರ್ನ ಸೀಲಿಂಗ್ನಲ್ಲಿ ಬೆಂಕಿ ಕಾಣಿಸಿಕೊಂಡಿತು, ಇದು ವಿಮಾನ ನಿಲ್ದಾಣದಲ್ಲಿನ ಸಂಪೂರ್ಣ ವಲಸೆ ವ್ಯವಸ್ಥೆಯನ್ನು ಅಸ್ತವ್ಯಸ್ತಗೊಳಿಸಿತು.
Papisthan