
ChatGPT-5 ಬಿಡುಗಡೆ ಕಾರ್ಯಾಕ್ರಮದಲ್ಲಿ Open AI ಸಿಇಒ ಸ್ಯಾಮ್ ಅಲ್ಟ್ ಮಾನ್ ರವರು ಭಾರತದ ಮಾರುಕಟ್ಟೆಯು ಯಾವ ರೀತಿ ವೇಗವಾಗಿ ಬೆಳವಣಿಗೆಯಾಗುತ್ತಿದೆ ಎಂದು ಹೇಳಿದ್ದಾರೆ. ಅವರು ಯಾವ ಪರಿ ಹೇಳಿದ್ದಾರೆ ಎಂದರೆ ವಿಶ್ವದ ದೂಡ್ಡಣ್ಣ ಎಂದೆನಿಸಿಕೋಳ್ಳುವ ಅಮೆರಿಕವನ್ನು ಮುಂದೊಂದು ದಿನ ವಿಶ್ವದ ಅತಿ ಹೆಚ್ಚು ಜನ ಸಂಖ್ಯೆವುಳ್ಳ ಭಾರತವು ChatGPT ಬಳಸುವವರ ಸಾಲಿನಲ್ಲಿ ಮೊದಲ ಸ್ಥಾನವನ್ನು ಅಲಂಕರಿಸಲಿದೆ ಎಂದು ಹೇಳಿದ್ದಾರೆ.

ಒಪನ್ ಎಐ ತನ್ನ ಎಐ ಮಾದರಿಯ ಇತ್ತೀಚಿನ ಆವೃತ್ತಿಯಾಗಿರುವ ChatGPT-5 ಅನ್ನು ಬಿಡುಗಡೆ ಮಾಡಿದ್ದು, ಇದನ್ನು ಉಚಿತ ಮತ್ತು ಪಾವತಿಯಿಂದ ಬಳಸುವ ChatGPT ಚಂದದಾರರಿಗೆ ಹಾಗೂ ಅಭಿವೃಧ್ಧಿಪಡಿಸುವರಿಗೆ API ಮೂಲಕ ಲಭ್ಯವಿದೆ. ಕಂಪನಿಯು GPT-5 ಏಕೆ ಉತ್ತಮ ಎಂದು ಕೆಲವು ಕಾರಣಗಳನ್ನು ನೀಡಿದೆ ಅವುಗಳೆಂದರೆ, ಗತಿಯು, ಖಚಿತತೆ ಮತ್ತು ಗಣಿತ ಸಾಮರ್ಥ್ಯದಲ್ಲಿ ಹೆಚ್ಚಿನ ಸುಧಾರಣೆಯನ್ನು ನೀಡಲಿದೆ ಎಂದು ಹೇಳಿದೆ.

news9gazette.com
ಬಿಡುಗಡೆ ಕಾರ್ಯಕ್ರಮದಲ್ಲಿ, CEO ಸ್ಯಾಮ್ ಆಲ್ಟ್ ಮಾನ್ ಭಾರತೀಯ ಮಾರುಕಟ್ಟೆಯ ಹೆಚ್ಚುತ್ತಿರುವ ಮಹತ್ವವನ್ನು ವಿವರವಾಗಿ ಹೇಳಿದರು. ” ಭಾರತ ನಮಗೆ ಯುಎಸ್ ನಂತರದ ದ್ವಿತೀಯ ಅತ್ಯುತ್ತಮ ಮಾರುಕಟ್ಟೆ, ಮತ್ತು ಇದು ಸಾಧ್ಯವಾದರೆ ನಮ್ಮ ಅತಿದೊಡ್ಡ ಮಾರುಕಟ್ಟೆಯಾಗಿ ಬೆಳೆಯಬಹುದು” ಎಂದು ಅವರು ತಿಳಿಸಿದರು. “ಭಾರತದಲ್ಲಿ ಬಳಕೆದಾರರು ಏನೇನು AI ನೊಂದಿಗೆ ಮಾಡುತ್ತಿದ್ದಾರೆಂದು ನಮಗೆ ತಿಳಿಯದು ಆದರು ಇದು ತುಂಬ ವಿಶೇಷವಾಗಿದೆ.” ಎಂದು ಅವರು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.
ಸೆಪ್ಟಂಬರ್ ನಲ್ಲಿ ಭಾರತ ಪ್ರವಾಸ ಕೈಗೊಳ್ಳಲಿರುವ ಒಪನ್ ಎಐ ಸಿಇಒ ಸ್ಯಾಮ್ ಅಲ್ಟ್ ಮಾನ್: ChatGPT-5 ಬಿಡುಗಡೆ ಕಾರ್ಯಾಕ್ರಮದಲ್ಲಿ ಅವರು ತಮ್ಮ ಮಾತುಗಳನ್ನು ಮುಂದುವರಿಸುತ್ತಾ ಏನು ಹೇಳಿದರು ಎಂದರೆ ಅವರು ತಮ್ಮ ಸ್ಥಳೀಯ ಸಹಭಾಗಿಗಳೊಂದಿ ಭಾರತದಲ್ಲಿ ಎಐ ನ ಲಭ್ಯತೆ ಮತ್ತು ಏಕೀಕರಣವನ್ನು ಸುಧಾರಿಸುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ ಇದರ ಜೋತೆಗೆ ಅವರು ಮುಂದಿನ ತಿಂಗಳಿನಲ್ಲಿ ಅಂದರೆ ಸೆಪ್ಟಂಬರ್ ನಲ್ಲಿ ಭಾರತಕ್ಕೆ ಭೇಟಿ ನೀಡುವುದಾಗಿ ಹೇಳಿದ್ದಾರೆ.
ChatGPT-5 ಅನ್ನು ಕೋಡಿಂಗ್ ಮತ್ತು ಏಜೆಂಟಿಕ್ ಕೆಲಸಗಳಿಗೆ ಇದುವರೆಗೆ ಇರುವ ಅತ್ಯಂತ ಬಲಶಾಲಿ ಮಾಡೆಲ್ ಯೆಂದು ಹೇಳಿದೆ. ಇದು ಮೂರು ಗಾತ್ರಗಳಲ್ಲಿ ಲಭ್ಯವಿದೆ: GPT-5, GPT-5-ಮಿನಿ ಮತ್ತು GPT-5-ನ್ಯಾನೊ, ಇದು ಡೆವಲೆಪರ್ ಗಳಿಗೆ ಕಾರ್ಯಕ್ಷಮತೆ ಮತ್ತು ವೆಚ್ಚದ ನಡುವೆ ಆಯ್ಕೆ ಮಾಡಲು ಅದ್ಭುತ ಅವಕಾಶ ನೀಡುತ್ತದೆ. API ಯಲ್ಲಿ, GPT-5 reasoning ಮಾದರಿಯಾಗಿದೆ, ಇನ್ನೊಂದು ಕಡಿಮೆ ತೂಕ, reasoning ಅಲ್ಲದ ಮಾದರಿಯನ್ನು GPT-5-ಚಾಟ್ ಲೇಟೆಸ್ಟ್ ಎಂದು ಕರೆಯಲ್ಪಡುತ್ತದೆ.
ಆಲ್ಟ್ಮಾನ್ ಅವರು GPT-5, ವಿಶೇಷವಾಗಿ ಟೆಕ್ನೊ-ಮಟ್ಟದ ಪ್ರತಿದಾನಗಳಲ್ಲಿ, GPT-4ಕ್ಕಿಂತ ದೊಡ್ಡ ಪ್ರಗತಿಯನ್ನು ಸಾಧಿಸುತ್ತದೆ ಎಂದು ಹೇಳಿದರು. “ಇದು ನಮ್ಮ ಮುಖ್ಯ ಶ್ರೇಣಿಯ ಮಾದರಿಯಲ್ಲಿಯೇ ಪ್ರಥಮ ಬಾರಿಗೆ ಪಿಎಚ್ಡಿ-ಮಟ್ಟದ ತಜ್ಞನೊಂದಿಗೆ ಮಾತನಾಡಿದಂತೆ ಆಗಿದೆ” ಎಂದು ಅವರು ಹೇಳಿದರು. “ನಾವು ಇದನ್ನು ಮೊದಲ ಬಾರಿಗೆ ನಮ್ಮ ಉಚಿತ ಹರಿವಿನಲ್ಲಿ ಲಭ್ಯವಿರಿಸಲು ಬಯಸಿದಂತಿದೆ.”
ChatGPT ತಂಡದ ಬಳಕೆದಾರರು ಈಗಾಗಲೇ GPT-5 ಅನ್ನು ಪ್ರವೇಶಿಸಬಹುದು, ಎಂಟರ್ಪ್ರೈಸ್ ಮತ್ತು ವಿಧ್ಯಾಸಂಸ್ಥೆ ಗ್ರಾಹಕರು ಮುಂದಿನ ಒಂದು ವಾರದಲ್ಲಿ ಇದನ್ನು ಪಡೆಯುತ್ತಾರೆ. ವಿಸ್ತೃತ ಸರಣಿ ನೀಡುವ GPT-5 ಪ್ರೋ ಕೂಡ ಶೀಘ್ರದಲ್ಲೇ ಈ ಗ್ರಾಹಕರಿಗೆ ಬಿಡುಗಡೆ ಮಾಡಲಾಗುತ್ತದೆ.
ChatGPT ಪ್ಲಸ್ ಸದಸ್ಯರು (~ರೂ. 1,660/ಮಾಸಿಕ) GPT-5 ಗೆ ಹೆಚ್ಚಿನ ಬಳಕೆ ಮಿತಿಗಳನ್ನು ಪಡೆಯುತ್ತಾರೆ, ಆದರೆ ಪ್ರೋ-ಮಾದರಿ ಬಳಕೆದಾರರು (~ರೂ. 16,600/ಮಾಸಕ್ಕೆ) ನಿಯಂತ್ರಣವಿಲ್ಲದ ಪ್ರವೇಶವನ್ನು ಮತ್ತು ಹೆಚ್ಚು ವಿಶ್ವಾಸಾರ್ಹ ಮತ್ತು ವಿವರವಾದ ಉತ್ತರಗಳೊಂದಿಗೆ ಸುಧಾರಿತ GPT-5 ಪ್ರೊ ಮಾದರಿಯನ್ನು ಪಡೆಯುತ್ತಾರೆ.