
Pahalgam ದಾಳಿ ಆದ ನಂತರ ಒಂದು ವೀಡಿಯೊ ವೈರಲ್ ಆಗಿತ್ತು, ಅದು ಭಾರತೀಯ ನೌಕಾಪಡೆಯ ಲೆಫ್ಟಿನೆಂಟ್ ವಿನಯ್ ನರ್ವಾಲ್ ಮತ್ತು ಅವರ ಪತ್ನಿ ಹಿಮಾಂಶಿ ಸೋಮಿ ಅವರದು ಎನ್ನಲಾಗಿತ್ತು. ಆದರೆ ಅದು ಸತ್ಯಕ್ಕೆ ದೂರವಾದ ವಿಷಯ ಎಂದು ಈಗ ತಿಳಿದು ಬಂದಿದೆ.

ಮಂಗಳವಾರ Pahalgam ನಲ್ಲಿ ಭಯೋತ್ಪಾದಕ ದಾಳಿ ನಡೆಯುವ ಮುನ್ನ ಭಾರತೀಯ ನೌಕಾಪಡೆಯ ಲೆಫ್ಟಿನೆಂಟ್ ವಿನಯ್ ನರ್ವಾಲ್ ಮತ್ತು ಅವರ ಪತ್ನಿ ಹಿಮಾಂಶಿ ಸೌಮಿ ನೃತ್ಯ ಮಾಡಿದ್ದಾರೆ ಎನ್ನಲಾಗಿರು ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ದಾಳಿ ನಂತರ ಸುದ್ದಿ ಮಾಡುತ್ತಿದೆ. ಆದರೆ ಇದನ್ನು ಅಧಿಕಾರಿಯ ಕುಟುಂಬವು ತಳ್ಳಿಹಾಕಿದೆ. ಹಾಗೂ ಈ ವೀಡಿಯೊ ದಲ್ಲಿರುವ ನಿಜವಾದ ದಂಪತಿಗಳು ಇದು ಲೆಫ್ಟಿನೆಂಟ್ ವಿನಯ್ ನರ್ವಾಲ್ ಮತ್ತು ಅವರ ಪತ್ನಿ ಹಿಮಾಂಶಿ ಸೌಮಿ ಅವರದಲ್ಲ ತಮ್ಮದು ಎಂದು ತಿಳಿಸಲು ಮುಂದೆ ಬಂದಿದ್ದಾರೆ ಮತ್ತು ಇದನ್ನು ಕೆಲವರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.
ವೀಡಿಯೋದಲ್ಲಿ ಏನಿದೆ?
ಈ ವೀಡಿಯೋದಲ್ಲಿ ಯುವ ಜೋಡಿಗಳು ನೃತ್ಯ ಮಾಡುತ್ತಿರುವುದನ್ನು ತೋರಿಸುತ್ತದೆ ಅದು Pahalgam ನ ಬೈಸರನ್ ಕಣಿವೆಯಲ್ಲಿ ಮಾಡಿರುವುದು ಮತ್ತು ಇದು ೧೯ಸೆಕೆಂಡ್ ಇದೆ. ಈ ವೀಡಿಯೋದಲ್ಲಿ ನಾವು ಒಂದು ಹಿನ್ನಲೆ ಗಾಯನವನ್ನು ಕೇಳಬಹುದು ಅದು ಯಾವುದು ಎಂದರೆ ಜನಪ್ರಿಯ ಕೋಕ್ ಸ್ಟುಡಿಯೋ ಹಾಡಾದ ಝೋಲ್. ಏಪ್ರಿಲ್ 22 ರಂದು ಅಂದರೆ ಮಂಗಳವಾರ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ನಡೆದ ಭಯೋತ್ಪಾದಕ ದಾಳಿಯಲ್ಲಿ ಜೀವ ಚೆಲ್ಲುವ ಮೊದಲು ನೌಕಾಪಡೆಯ ಲೆಫ್ಟಿನೆಂಟ್ ವಿನಯ್ ನರ್ವಾಲ್ ಮತ್ತು ಅವರ ಪತ್ನಿ ಹಿಮಾಂಶಿ ಸೌಮಿ Pahalgam ಪ್ರವಾಸದ ವೇಳೆ ಮಾಡಿದ ಕೊನೆಯ ವೀಡಿಯೊ ಇದು ಎಂದು ಶೀರ್ಷಿಕೆಯೊಂದಿಗೆ ಇದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.
ವೀಡಿಯೊದಲ್ಲಿರು ನಿಜವಾದ ದಂಪತಿಗಳು ಹೇಳಿರುವುದಾದರು ಏನು?
ಆಶಿಶ್ ಸೆಹ್ರಾವತ್ ಮತ್ತು ಯಾಶಿಕಾ ಶರ್ಮಾ ಇವರು ಈ ವೀಡಿಯೋದಲ್ಲಿರುವ ನಿಜವಾದ ದಂಪತಿಗಳು ಹಾಗು ಇವರು ಹವ್ಯಾಸಿ ಟ್ರಾವೆಲ್ ಕಂಟೆಂಟ್ ಕ್ರಿಯೇಟರ್ ಗಳಾಗಿದ್ದಾರೆ. ವೀಡಿಯೊ ವೈರಲ್ ಆದ ನಂತರ, ತಮ್ಮನ್ನು ವೀಡಿಯೋದಲ್ಲಿರುವ ದಂಪತಿಗಳು ಎಂದು ಹೇಳಿದ್ದಾರೆ. ಭಾರತೀಯ ರೈಲ್ವೆಯಲ್ಲಿ ಕೆಲಸ ಮಾಡುವ ಸೆಹ್ರಾವತ್, ಏಪ್ರಿಲ್ 14 ರಂದು ಕಾಶ್ಮೀರದಲ್ಲಿ ರಜಾದಿನಗಳಲ್ಲಿ ಈ ವೀಡಿಯೊವನ್ನು ರೆಕಾರ್ಡ್ ಮಾಡಲಾಗಿದೆ ಎಂದು ದೃಢಪಡಿಸಿದರು. ಸೆಹ್ರಾವತ್ ಅವರು ಸ್ಕ್ರೀನ್ ಶಾಟ್ ಅನ್ನು ಹಂಚಿಕೊಂಡಿದ್ದು, ವೀಡಿಯೊದ ಮೆಟಾಡೇಟಾವನ್ನು ಪ್ರದರ್ಶಿಸಿದ್ದಾರೆ, ಇದು ಏಪ್ರಿಲ್ 14 ರಂದು ರೆಕಾರ್ಡ್ ಮಾಡಲಾಗಿದೆ ಎಂದು ತೋರಿಸುತ್ತದೆ.
ವಿಪರ್ಯಾಸ ಎಂದರೆ ದಾಳಿ ನಡೆದ ದಿನವೇ ಅಂದರೆ ಮಂಗಳವಾರವೇ ದಂಪತಿಗಳು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದರು ಆದರೆ ಅವರೆಗೆ ಟೀಕೆಗಳ ಸರಮಾಲೆಯೇ ಹರಿದು ಬಂದವು ಇದಕ್ಕೆ ತಕ್ಷಣ ಅವರು ವೀಡಿಯೊವನ್ನು ತಮ್ಮ ಜಾಲತಾಣದಿಂದ ತೆಗೆದು ಹಾಕಿರುತ್ತಾರೆ ಇದಕ್ಕೆ ಅವರು ಕೋಟ್ಟ ಕಾರಣ ಏನೆಂದರೆ .
“ದಾಳಿ ನಡೆದ ಸ್ಥಳದಿಂದ ವೀಡಿಯೊವನ್ನು ಹಾಕಿದ್ದಕ್ಕೆ ನಾವು ಟೀಕೆಗಳನ್ನು ಸ್ವೀಕರಿಸಲು ಪ್ರಾರಂಭಿಸಿದ್ದೇವೆ, ಆದ್ದರಿಂದ ನಾವು ಅದನ್ನು ತೆಗೆದುಹಾಕಿದ್ದೇವೆ ಎಂದು ಹೇಳಿದ್ದಾರೆ, ಆದರೆ ಅಷ್ಟೊತ್ತಿಗಾಗಲೇ ಯಾರೋ ಅದು ವಿನಯ್ ನರ್ವಾಲ್ ದಂಪತಿಗಳ ಕೊನೆಯ ನೃತ್ಯ ಎಂದು ಸುಳ್ಳು ಹೇಳಿಕೆಯೊಂದಿಗೆ ಅದನ್ನು ಪ್ರಸಾರ ಮಾಡಲು ಪ್ರಾರಂಭಿಸಿದ್ದರು” ಎಂದು ಸೆಹ್ರಾವತ್ ಹೇಳಿದರು.
ವೈರಲ್ ಆದ ನರ್ವಾಲ್ ದಂಪತಿಗಳ ಕೊನೆಯ ಪೋಟೊ:
ದುಃಖಿತ ಮಹಿಳೆಯೊಬ್ಬಳು ತನ್ನ ಗಂಡನ ಪಕ್ಕದಲ್ಲಿ ಕುಳಿತಿರುವ ವೈರಲ್ ಪೋಟೊವನ್ನು ವಿನಯ್ ನರ್ವಾಲ್ ಮತ್ತು ಅವರ ಪತ್ನಿ ಹಿಮಾಂಶಿಯದು ಎಂದು ಇಬ್ಬರು ಲೆಫ್ಟಿನೆಂಟ್ ಅಧಿಕಾರಿಗಳು ಮತ್ತು ಅನೇಕ ಕುಟುಂಬ ಸದಸ್ಯರು ದೃಢಪಡಿಸಿದ್ದಾರೆ.

ಸ್ವಿಟ್ಜರ್ಲೆಂಡ್ ಗೆ ಹೊರಟ್ಟಿದವರು ಹೊಗಿದ್ದು ಮಿನಿ ಸ್ವಿಟ್ಜರ್ಲೆಂಡ್ ಗೆ..!!
ಲೆಫ್ಟಿನೆಂಟ್ ನರ್ವಾಲ್ ಏಪ್ರಿಲ್ 16 ರಂದು ತಮ್ಮ ವಿವಾಹ ಆರತಕ್ಷತೆಯ ನಂತರ Pahalgam ಗೆ ಪ್ರಯಾಣಿಸಿದ್ದರು. ಮಧುಚಂದ್ರವನ್ನು ಆಚರಿಸಲು ಅವರು ಕೆಲಸದಿಂದ ರಜೆಯಲ್ಲಿದ್ದರು. ಅವರು ಸ್ವಿಟ್ಜರ್ಲೆಂಡ್ನಲ್ಲಿ ಮಧುಚಂದ್ರದ ಕನಸು ಕಂಡರು ಆದರೆ ವೀಸಾ ವಿಳಂಬವು ಅವರ ಯೋಜನೆಗಳನ್ನು ಬದಲಾಯಿಸುವಂತೆ ಮಾಡಿತು. ಅವರು ಭಾರತದ ‘ಮಿನಿ ಸ್ವಿಟ್ಜರ್ಲೆಂಡ್’ ಎಂದು ಕರೆಯಲ್ಪಡುವ Pahalgam ಹೋಗಲು ನಿರ್ಧರಿಸಿದರು.
