
PM modi receives Maritius Higest Civilian Honour
ಪ್ರಧಾನಿ Narendra Modi ಅವರು ಕಳೆದ ತಿಂಗಳು ಅಂದರೆ ಮಾರ್ಚ್ ನಲ್ಲಿ ಮಾರಿಷಸ್ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಆ ದೇಶದ ಗಣ್ಯರು ಮತ್ತು ಪ್ರಮುಖ ನಾಯಕರೊಂದಿಗೆ ಸಭೆ ನಡೆಸಿ, ಚರ್ಚೆ ನಡೆಸಿದರು. ಈ ಭೇಟಿಯ ಸಂದರ್ಭದಲ್ಲಿ ಮಾರಿಷಸ್ ನ ರಾಷ್ಟ್ರೀಯ ದಿನಾಚರಣೆಯ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಮಾರಿಷಸ್ ದೇಶವು ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಪ್ರಧಾನಿ ಮೋದಿ ಅವರಿಗೆ ನೀಡಿ ಗೌರವಿಸಿತು.

Grand Commander of the Order of the Star and Key of the Indian Ocean- GCSK
ಪ್ರಧಾನಿ ಮೋದಿ ಅವರ ಮಾರಿಷಸ್ ಭೇಟಿಯ ಸಂದರ್ಭದಲ್ಲಿ ಮಾರಿಷಸ್ನ ಅಧ್ಯಕ್ಷ ಧರಮ್ ಗೋಖುಲ್ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘Grand Commander of the order of the star and key of the Indian Ocean’ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಭಾರತ ಮತ್ತು ಮಾರಿಷಸ್ ಸಂಬಂಧವನ್ನು ಬಲಪಡಿಸುವಲ್ಲಿ ಕೊಡುಗೆ ನೀಡಿದವರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಪ್ರಧಾನಿ ಮೋದಿ ಅವರು ಈ ಪ್ರಶಸ್ತಿ ಪಡೆದ ಮೊದಲ ಭಾರತೀಯ ಮತ್ತು ಐದನೆ ವಿದೇಶಿ ಪ್ರಜೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.
ಈ ಪ್ರಶಸ್ತಿಯು ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿದೇಶವೊಂದು ನೀಡುತ್ತಿರುವ 21 ನೇ ಅಂತರರಾಷ್ಟ್ರೀಯ ಪ್ರಶಸ್ತಿಯಾಗಿದೆ.
ಮಾರಿಷಸ್ ನ ರಾಷ್ಟ್ರೀಯ ದಿನಾಚರಣೆಯ ಮುಖ್ಯ ಅತಿಥಿಯಾಗಿ ಪ್ರಧಾನಿ ಮೋದಿ: ಮಾರಿಷಸ್ ನ ಪ್ರಧಾನಿ ಡಾ.ನವೀನ್ ಚಂದ್ರ ರಾಮ್ ಗುಲಂ ಅವರ ಆಹ್ವಾನ ಮೇರೆಗೆ 2025ರ ಮಾರ್ಚ್ 12 ರಂದು ಮಾರಿಷಸ್ ಗಣರಾಜ್ಯದ ೫೯ ನೇ ರಾಷ್ಟ್ರೀಯ ದಿನಾಚರಣೆಯಲ್ಲಿ ಮುಖ್ಯ ಅತಿಥಿಗಳಾಗಿ ಪ್ರಧಾನಿ ಮೋದಿ ಅವರು ಭಾಗವಹಿಸಿದರು. ಭಾರತಿಯ ನೌಕಾ ಪಡೆಯ ಹಡಗಿನೊಂದಿಗೆ ಭಾರತಿಯ ರಕ್ಷಣಾ ಪಡೆಯ ತುಕಡಿಯೊಂದು ಆಚರಣೆಯಲ್ಲಿ ಭಾಗಿವಹಿಸಿತು. ಭಾರತೀಯ ಯುದ್ಢ ನೌಕೆಯು ಜೋತೆಗೆ ವಾಯುಫ್ಡೆಯ ಸ್ಕೈದೈವ್ನ ‘ಆಕಾಶ ಗಂಗಾ” ತಂಡವು ಮಾರಿಷಸ್ ಸ್ವಾತಂತ್ರ್ಯ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿತು.
- ಮಾರಿಷಸ್ ಪ್ರಧಾನಿ ಮತ್ತು ಪತ್ನಿ ಗೆ ‘ಸಾಗರೋತ್ತರ ನಾಗರೀಕತ್ವ ಕಾರ್ಡ್’ ನೀಡಿದ ಪ್ರಧಾನಿ ಮೋದಿ: ಮಾರಿಷಸ್ ನ ಪ್ರಧಾನಿ ಡಾ.ನವೀನ್ ಚಂದ್ರ ರಾಮ್ ಗುಲಂ ಮತ್ತು ಅವರ ಪತ್ನಿ ವೀಣಾ ಅವರಿಗೆ ಪ್ರಧಾನಿ ಮೋದಿ ಅವರು ಭಾರತದ ಸಾಗರೋತ್ತರ ನಾಗರೀಕತ್ವ ಕಾರ್ಡ್(ಒಸಿಐ) ನೀಡಿದರು. ಮಾರಿಷಸ್ ನೊಂದಿಗಿನ ದ್ವಿಪಕ್ಷೀಯ ಸಂಬಂಧ ಮತ್ತು ಅಲ್ಲಿರುವ ಭಾರತೀಯರ ಬದ್ಧತೆಯ ಪ್ರತೀಕವಾಗಿ ಒಸಿಐ ಕಾರ್ಡ್ ನೀಡಲಾಗಿದೆ.
- ಮಾರಿಷಸ್ ನ ಅಧ್ಯಕ್ಷ ಧರಮ್ ಗೋಖುಲ್ ಅವರಿಗೆ ಮಹಾಕುಂಭ ಮೇಳದ ಗಂಗಾ ಜಲ ಉಡುಗೊರೆ: ಪ್ರಧಾನಿ ಮೋದಿ ಅವರು ಮಾರಿಷಸ್ ನ ಪ್ರವಾಸ ಸಂದರ್ಭದಲ್ಲಿ ಮಾರಿಷಸ್ ನ ಅಧ್ಯಕ್ಷ ಧರಮ್ ಗೋಖುಲ್ ಅವರಿಗೆ ಮಹಾಕುಂಭ ಮೇಳದ ಗಂಗಾ ಜಲ ಉಡುಗೊರೆಯಾಗಿ ನೀಡಿದ್ದಾರೆ. ಅದರೊಂದಿಗೆ ಗೋಖುಲ್ ದಂಪತಿಗೆ ಗಂಗಾ ಜಲದೊದಿಗೆ ‘ಮಖಾನ’ ಸೇರಿದಂತೆ ಅಲವಾರು ಉಡುಗೊರೆ ನೀಡಿದ್ದಾರೆ.
ಭಾರತೀಯರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ:


ಪ್ರಧಾನಿ ಮೋದಿ ಅವರು ಮಾರಿಷಸ್ ಭೇಟಿ ಸಂದರ್ಭದಲ್ಲಿ ಮಾರಿಷಸ್ ನಲ್ಲಿರುವ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದರು. ಮಾರಿಷಸ್ ನಲ್ಲಿ ಒಟ್ಟು 12ಲಕ್ಷ ಜನಸಂಖ್ಯೆ ಇದ್ದು, ಅವರಲ್ಲಿ ಶೇ.70% ಭಾರತೀಯರಿದಾರೆ.ಮಾರಿಷಸ್ ನ್ನು ‘ಮೀನಿ ಭಾರತ ಎಂದು ವರ್ಣಿಸಿದರು. ಮಾರಿಷಸ್ ನಲ್ಲಿರುವ ಭಾರತೀಯ ವಲಸಿಗರಿಂದ ಪ್ರಧಾನಿ ಮೋದಿ ಆತ್ಮೀಯ ಸ್ವಾಗತ ದೊರೆಯಿತು. ಸಮುದಾಯದ ಮಹಿಳೆಯರು ;ಗೀತ್ ಗವಾಯಿ’ ಎಂಬ ಸಾಂಪ್ರದಾಯಿಕ ಭೋಜ್ ಪುರಿ ಪ್ರದರ್ಶನದ ಮೂಲಕ ಗೌರವಿಸಿದರು.
ಗೀತ್ ಗವಾಯಿಯನ್ನು 2016ರಲ್ಲಿ ಯುನೆಸ್ಕೋ ಮಾನವಿಯತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಭಾಗ ಎಂದು ಗುರ್ತಿಸಲಾಗಿತ್ತು.
ಗೀತ್ ಗವಾಯಿಯನ್ನು 2016ರಲ್ಲಿ ಯುನೆಸ್ಕೋ ಮಾನವಿಯತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಭಾಗ ಎಂದು ಗುರ್ತಿಸಲಾಗಿತ್ತು.
ಪ್ರಧಾನಿ ಮೋದಿ ಅವರು ಮಾರಿಷಸ್ ನ ಸಂಸ್ಥಾಪಕ ಪಿಥಾಮಹ ಮತ್ತು ಮಾರಿಷಸ್ ನ ರಾಷ್ಟ್ರಪಿತ ಎಂದೇ ಖ್ಯಾತರಾದ ಶಿವಸಾಗುರ್ ರಾಮ್ ಗುಲಂ ಅವರ ಸಮಾದಿಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವವನ್ನು ಸಲ್ಲಿಸಿದರು.
ಮಾರಿಷಸ್ – ಭಾರತ ನಡುವಿನ ಒಪ್ಪಂದಗಳು:
ಪ್ರಧಾನಿ ಮೋದಿ ಅವರ ಮಾರಿಷಸ್ ನ ಬೇಟ್ಯ ಸಂದರ್ಭದಲ್ಲಿ ಮಾರಿಷಸ್ ಪ್ರಧಾನಿಯೊಂದಿಗೆ ದ್ವಿಪಕ್ಷಿಯ ಮಾತುಕತೆ ನೆಡಿಸಿ ವ್ಯಾಪಾರ,ಕಡಲ್ಗಾವಲು,ಕಡಲ ಭದ್ರತೆ, ಪರಸ್ಪರ ಮಾಹಿತಿ ವಿನಿಯಮ ಗಡಿಯಲ್ಲಿ ಉಭಯ ದೇಶಗಳ ಕರೆನ್ಸಿ ಬಳಕೆ, ವ್ಯಾಪರ ವ್ಯವಹಾರದಲ್ಲಿ ಸಂಯೋಗ, ಅಕ್ರಮ ಹಣ ವರ್ಗಾವಣೆ ತಡೆಗೆ ಜಂಟಿ ಕಾರ್ಯಾಚರಣೆ,ಮಧ್ಯಮ ಮತ್ತು ಸಣ್ಣ ಕೈಗಾರಿಕೆಗಳ ಬೆಳವಣಿಗೆಗೆ ಸಹಕಾರ ನೀಡುವುದು ಸೇರಿದಂತೆ ವಿವಿಧ ಕ್ಷೇತ್ರಗಳೀಗೆ ಸಂಬಂಧಿಸಿ ೮ ಒಪ್ಪಂದಕ್ಕೆ ಉಭಯ ದೇಶಗಳ ಪ್ರಧಾನಿಗಳು ಸಹಿ ಹಾಕಿದರು.
ಪ್ರಧಾನಿ ಮೋದಿ ಅವರು ಜಗತ್ತಿನ ದಕ್ಷಿಣ ದೇಶಗಳ ಅಭಿವೃದ್ಧಿಗೆ ಮಹತ್ವಾಕಾಂಕ್ಷಿಯಾದ ದೊರದೃಷ್ಟಿಯ ‘ಮಹಾ ಸಾಗರ್ ಯೋಜನೆ’ ಯನ್ನು ಘೋಷಿಸಿದ್ದಾರೆ.
MAHASAGAR– Maritime Heads for Active Security And Growth for all in the Region |
ಮಹಾಸಾಗರ್ ಎಂದರೆ ಪ್ರದೇಶ ಭದ್ರತೆ ಮತ್ತು ಪ್ರಗತಿಗಾಗಿ ಪರಸ್ಪರ ಮತ್ತು ಸಮಗ್ರವಾದ ಸಹಕಾರ ಎಂದರ್ಥ.೨೦೧೫ರಲ್ಲಿ ಪ್ರಧಾನಿ ಅವರು ಮಾರಿಷಸ್ ಗೆ ಭೇಟಿ ನೀಡಿದ್ದಾಗ ಸಾಗರ ಎನ್ನುವರು. ದೂರದೃಷ್ಟಿಯ ಯೋಜನೆಯನ್ನು ಘೋಷಿಸಿದ್ದರು.ಇದರ ಮುಂದುವರೆದ ಭಾಗವಾಗಿ ಮಹಾಸಾಗರ್ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ.ಹಿಂದೂ ಮಹಾಸಗರ ವ್ಯಾಪ್ತಿಯ ಪ್ರದೇಶದಲ್ಲಿ ವ್ಯಾಪಾರ ಅಭಿವೃದ್ಧಿ,ಸುಸ್ಥಿರ ಬೆಳವಣಿಗೆ ಹಾಗೂ ಪರಸ್ಪರ ಭದ್ರತಾ ಸಹಕಾರಕ್ಕೆ ಒತ್ತು ನೀಡುವುದು ಯೋಜನೆಯ ಉದ್ದೇಶವಾಗಿದೆ.
ಪ್ರಧಾನಿ ಮೋದಿ ಅವರ ಘೋಷಣೆಗಳು:
- ಮಾರಿಷಸ್ ನೂತನ ಸಂಸತ್ ಭವನ ನಿರ್ಮಾಣಕ್ಕೆ ಭಾರತ ಸಹಕಾರಿ ನೀಡಲಿದೆ. ಪ್ರಜಾಪ್ರಭುತ್ವ ಮಾತೆಯಾದ ಭಾರತದಿಂದ ಮಾರಿಷಸ್ ಗೆ ಇದು ಉಡುಗೂರೆ ಎಂದು ಹೇಳಿದರು.
- ಚಾಗೋಸ್ ದ್ವೀಪದ ಅಭಿವೃದ್ಧಿಗೆ ಒತ್ತು ನೀಡಲಾಗುವುದು.
- ಮಾರಿಷಸ್ ನ ಸೌರ್ವಭೌಮಕ್ಕೆ ಧಕ್ಕೆಯಾಗದಂತೆ, ಉಭಯ ದೇಶಗಳಿಗೆ ಪ್ರಯೋಜನಕಾರಿಯಾದ ವಾಣಿಜ್ಯ ಹಡಗುಗಳ ಸಂಚಾರ ನೀಲಿ ಆರ್ಥಿಕತೆಯ ಅಭಿವೃದ್ಧಿಗೆ ಒತ್ತು ನೀಡಲಾಗುವುದೆಂದು ಪ್ರಧಾನಿ ಮೋದಿ ಅವರು ಘೋಷಿಸಿದರು.