
Clik here for Live Score CSK VS SRH.
ಚೆನ್ನೈ: ಐದು ಬಾರಿಯ ಚಾಂಪಿಯನ್ಸ್ Chennai Super Kings ಈ ಋತುವಿನಲ್ಲಿ ಅಂದರೆ 2025 ರಲ್ಲಿ ಯಾಕೊ ಮಂಕಾಗಿದೆ. ಆಡಿರುವ 8 ಪಂದ್ಯದಲ್ಲಿ ಕೇವಲ ಎರಡರಲ್ಲಿ ಮಾತ್ರ ಜಯಿಸಿದೆ. ಋತುವಿನ ಆರಂಭದಲ್ಲಿ ಋತುರಾಜ್ ಗಾಯಕ್ವಾಡ್ ನಾಯಕತ್ವದಲ್ಲಿ ಕಣಕ್ಕೆ ಇಳಿದ ಸೂಪರ್ ಕಿಂಗ್ಸ್ ಒಂದು ಪಂದ್ಯದಲ್ಲಿ ಮಾತ್ರ ಜಯಿಸಿತು, ನಂತರ ನಾಯಕತ್ವ ವಹಿಸಿಕೊಂಡ ಧೋನಿ ಅವರು ಕೂಡ ಒಂದು ಪಂದ್ಯದಲ್ಲಿ ಸೂಪರ್ ಕಿಂಗ್ಸ್ ತಂಡವನ್ನು ಗೆಲುವಿನ ದಡ ಸೇರಿಸಿದರು. ನಾಯಕತ್ವ ಬದಲಾದ ನಂತರ ಸೂಪರ್ ಕಿಂಗ್ಸ್ ಅಭಿಮಾನಿಗಳು ಬಾರಿ ನೀರಿಕ್ಷೆ ಇಟ್ಟುಕೊಂಡಿದ್ದರು ಆದರೆ ಅದು ಸಫಲಗೊಳ್ಳಲಿಲ್ಲ. ನಾಯಕತ್ವ ಬದಲಾವಣೆ ಸದ್ಯ ನಾಯಕನ ಬದಲಾವಣೆಯಾಗಿದಿಯೇ ಹೊರತು ಸೂಪರ್ ಕಿಂಗ್ಸ್ ಹಣೆಬರಹವನ್ನು ಬದಲಾಯಿಸಲಿಲ್ಲ.

ಇನ್ನೂ Sun Raisers Hyderabad ಕಥೆಯೆನು ಭಿನ್ನವಾಗಿಲ್ಲ ಅವರು ಕೂಡ ಆಡಿರುವ 8 ಪಂದ್ಯಗಳಲ್ಲಿ ಕೇವಲ 2 ಪಂದ್ಯಗಳನ್ನು ಮಾತ್ರ ಜಯಿಸಿದ್ದಾರೆ. ಇಲ್ಲಿ ನಾವು ಉಭಯ ತಂಡಗಳ ಸಾಮ್ಯತೆಯನ್ನು ಕಾಣಬಹುದು.
ಇಂದು ಈ ಎರಡು ತಂಡಗಳೂ ಮುಖಾಮುಖಿ ಯಾಗುವುದರಿಂದ ಸೊತವರ ನಡುವಿನ ಪಂದ್ಯವೆಂದೆ ಬಿಂಬಿಸಲಾಗಿದೆ. ಪಾಯಿಂಟ್ ಪಟ್ಟಿಯಲ್ಲಿ ಹತ್ತನೆಯ ಸ್ಥಾನದಲ್ಲಿರುವ ಸೂಪರ್ ಕಿಂಗ್ಸ್ ಗಿಂತ ಸನ್ ರೈಸರ್ಸ್ ಹೈದರಾಬಾದ್ ನ ನಿವ್ವಳ ರನ್ ರೇಟ್ ಚೆನ್ನಾಗಿರುವುದರಿಂದ ಈ ತಂಡವು ಒಂಬತ್ತನೆಯ ಸ್ಥಾನದಲ್ಲಿದೆ. ಈ ಎರಡು ತಂಡಗಳ ಪ್ಲೇ ಆಫ್ ಕನಸು ನನಸು ಮಾಡಿಕೊಳ್ಳಬೇಕಾದರೆ ಇಂದಿನ ಪಂದ್ಯ ಉಭಯ ತಂಡಗಳಿಗೆ ಬಹು ಮುಖ್ಯವಾಗಿದೆ.
ಕಳೆದ ವಾರ ಸೂಪರ್ ಜೈಂಟ್ಸ್ ತಂಡವನ್ನುತನ್ನದೆ ನೆಲದಲ್ಲಿ ಸೋಲಿಸುವ ಮೂಲಕ ಸೂಪರ್ ಕಿಂಗ್ಸ್ ತಂಡವು ಸೋಲಿನ ಸರಪಳಿಯಿಂದ ಹೊರಬಂದಿದೆ. ಆದರೆ ಐದು ದಿನಗಳ ಹಿಂದೆ ಪಾಂಡ್ಯ ಬಳಗದ ಮುಂದೆ ಮಂಡಿಯುರಿ ತಲೆಬಾಗಿತು.

- Beautiful Offer On baby Products

ಸೂಪರ್ ಕಿಂಗ್ಸ್ ತಂಡದ ಆರಂಭಿಕ ಬ್ಯಾಟರ್ಸ್ ಗಳ ಪ್ರದರ್ಶನ ತಂಡಕ್ಕೆ ದುಬಾರಿಯಾಗುತ್ತಿದೆ. ಆದರೆ ಸಮದಾನದ ವಿಷಯವೆನೆಂದರೆ ಮಧ್ಯಮ ಕ್ರಮಾಂಕದಲ್ಲಿ ರವೀಂದ್ರ ಜಡೇಜ,ದುಬೆ,ಆಯುಷ್ ಮಾತ್ರೆ ಮತ್ತು ಟೂರ್ನಿಯ ಹಿರಿಯ ಆಟಗಾರ ಧೋನಿ ಉತ್ತಮ ಲಯದಲ್ಲಿ ಇದ್ದಾರೆ. ಸನ್ ರೈಸರ್ಸ್ ತಂಡದ ಬ್ಯಾಟಿಂಗ್ ತುಂಬ ಬಲಾಡ್ಯವಾಗಿದೆ ಈ ತಂಡದ ಬ್ಯಾಟರ್ ಗಳ ವಿರುದ್ಧ ಸೂಪರ್ ಕಿಂಗ್ಸ್ ಬೌಲರ್ಸ್ ಗಳಾದ ಅಶ್ವಿನ್, ಖಲೀಲ್ ಅಹಮ್ಮದ್, ನೂರ್ ಅಹಮ್ಮದ್ ಮತ್ತು ಮಥೀಷ ಪಥಿರಾಣ ಯಾವ ರೀತಿ ಪ್ರದರ್ಶನ ನೀಡುತ್ತಾರೊ ಇದರೆ ಮೇಲೆ ಅವರ ಗೆಲುವು ನಿರ್ಣಯವಾಗಲಿದೆ. ಸನ್ ರೈಸರ್ಸ್ ತಂಡದ ಬ್ಯಾಟರ್ಸ್ ಗಳಾದ ನೀತಿಶ್ ರೆಡ್ಡಿ,ಅಭಿಷೇಕ್ ಶರ್ಮಾ, ಇಶಾನ್ ಕಿಶನ್ ಮತ್ತು ಟ್ರಾವಿಸ್ ಹೆಡ್ ಅವರುಗಳನ್ನು ಕಟ್ಟಿ ಹಾಕುವಲ್ಲಿ ಸೂಪರ್ ಕಿಂಗ್ಸ್ ಬೌಲರ್ಸ್ ಗಳು ಯಶಸ್ವಿಯಾದರೆ ಈ ತಂಡಕ್ಕೆ ಜಯ ಕಟಿಟ್ಟ ಬುತ್ತಿ. ಆದರೆ ಈ ಬ್ಯಾಟರ್ಸ್ ಗಳು ಕಳೆದ ಪಂದ್ಯದಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ ಎಂಬುವುದು ಇಲ್ಲಿ ಗಮನಿಸ ಬೇಕಿರುವ ಅಂಶ.
ಈ ಪಂದ್ಯವು ಸೂಪರ್ ಕಿಂಗ್ಸ್ ನ ತವರು ನೆಲದಲ್ಲಿ ಅಂದರೆ ಚೆನ್ನೈನಲ್ಲಿ ಜರುಗಲಿದೆ ಈ ಅಂಶವು ಚೆನ್ನೈಗೆ ವರದಾನವಾಗಲಿದೆಯೆ ಎಂದು ಕಾದು ನೋಡಬೇಕಾಗಿದೆ. ಈ ಪಂದ್ಯವು ಸಂಜೆ 7:30 ಕ್ಕೆ ಆರ್ಂಭವಾಗಲಿದೆ.
CSK