
ಹಿಂದೂ ಧರ್ಮದಲ್ಲಿ ಶ್ರಾವಣ ಮಾಸ ಬಂತೆಂದರೆ ಸಾಲು ಸಾಲು ಹಬ್ಬಗಳು ಅಥವ ಹಬ್ಬಗಳ ಸುಗ್ಗಿ ಬಂತೆಂದು ಅರ್ಥ. ಕಳೆದ ವಾರವಷ್ಟೆ ವರಮಹಾಲಕ್ಷ್ಮಿಹಬ್ಬವನ್ನು ಆಚರಿಸಿದ ಭಕ್ತವೃಂದಗಳು ಬರುವ ಶನಿವಾರ ಅಂದರೆ 8 ದಿನಗಳ ತರುವಾಯ ಅಷ್ಟಮಿ ದಿನದಂದು Sri Krishna Janmashtami ಆಚರಿಸಲು ಸಕಲ ಸಿದ್ಧತೆ ಮಾಡಿಕೊಂಡಿರುತ್ತಾರೆ.
ಈ ಹಬ್ಬದಲ್ಲಿ ಸಮಯವು ಸಂತೋಷಕರವಾಗಿದ್ದು, ಭಕ್ತ ಸಮೂಹವು ನೃತ್ಯ ಮತ್ತು ಭಜನೆಗಳನ್ನು ಹಾಡುವುದನ್ನು ರೂಡಿಸಿಕೊಂಡಿರುತ್ತಾರೆ, ಮತ್ತು ಕೃಷ್ಣನ ಪೂಜೆಯ ಸಮಯದಲ್ಲಿ ಉಪವಾಸ ಹಾಗೂ ಪೂಜಾ ಪ್ರಕ್ರಿಯೆಗಳು ಜೋರಾಗಿ ನೆಡೆಯುತ್ತದೆ. ಇದಲ್ಲದೆ ಕೃಷ್ಣನಿಗೆ ನೈವೇದ್ಯ ರೂಪದಲ್ಲಿ ಹಲವು ಬಗೆಯ ತಿಂಡಿ ತಿನಿಸುಗಳು ಮತ್ತು ಹಣ್ಣುಗಳನ್ನು ನೀಡುತ್ತಾರೆ.ಅನಂತರ ಒಂದು ಮಡಿಕೆಯೊಳಗೆ ಬೆಣ್ಣೆಯನ್ನು ತುಂಬಿ ಅದನ್ನು ಹೊಡೆಯುವ ಸರ್ಧೆಯನ್ನು ಕೊಡ ಆಯೊಜಿಸುತ್ತಾರೆ.
ಭಗವಾನ್ ಶ್ರೀಕೃಷ್ಣನ ಜನ್ಮರಹಸ್ಯ:
ಸುಮಾರು 10ನೇ ಶತಮಾನದ ಹಿಂದೆ ಭಗವತ ಪುರಾಣದ 10ನೇ ಪುಸ್ತಕದ ಪ್ರಕಾರ, Sri Krishna ಜನ್ಮವನ್ನು ಭಗವಾನ್ ಮಹಾವಿಷ್ಣುವಿನ ಅವತಾರವೆಂದು ನಂಬಲಾಗಿದೆ, ಹಾಗು ಶ್ರೀಕೃಷ್ಣನ ಜನ್ಮವು ಅಸುರರ ಹುಟ್ಟನ್ನು ಅಡಗಿಸುವುದಕ್ಕೆ ಮತ್ತು ಭೂಮಿಯ ಮೇಲಿನ ಕಷ್ಟವನ್ನು, ಒತ್ತಡವನ್ನು ಬೇರು ಸಮೇತ ಕಿತ್ತುಹಾಕಿ ಆಳ್ವಿಕೆ ಮಾಡುವ ರಾಜನೆಂದೆ ಭಾವಿಸಲಾಗಿದೆ.
ಕಂಸನ ತಂಗಿ ದೇವಕಿ ವಸುದೇವನೊಂದಿಗೆ ವಿವಾಹವಾಗುವಾಗ, ಆಕಾಶದಿಂದ ಬಂದ ಅಶರೀರ ಭವಿಷ್ಯವಾಣಿ, ಅವಳ ಎಂಟನೇ ಮಗನು ಕಂಸನನ್ನು ಕೊಲ್ಲುತ್ತನೆ ಎಂದು ನುಡಿಯುತ್ತದೆ. ಇದರಿಂದ ಕಂಸನು ವಿಚಲಿತನಾಗಿ ತನ್ನ ಮೃತ್ಯುವನ್ನು ತಪ್ಪಿಸಲು ತನ್ನ ತಂಗಿ ದೇವಕಿಯನ್ನು ಕೊಲ್ಲಲು ಸ್ವತಃ ತಾನೇ ನಿರ್ಧರಿಸುತ್ತಾನೆ, ಈ ಸಮಯದಲ್ಲಿ ಮಧ್ಯಬಂದ ವಸುದೇವನು ಕಂಸನಲ್ಲಿ ಮಂಡಿಯೂರಿ ತನಗೆ ಮತ್ತು ದೇವಕಿಗೆ ಹುಟ್ಟುವ ಎಲ್ಲ ಮಕ್ಕಳನ್ನು ನಿಮಗೆ ಒಪ್ಪಿಸುತ್ತೇನೆ ಎಂಥ ಕೇಳಿಕೊಳ್ಳುತ್ತಾನೆ ಇದಕ್ಕೆ ಕಂಸನು ಕೂಡ ಒಪ್ಪಿಕೊಳ್ಳುತ್ತಾನೆ ಮತ್ತು ಅವರನ್ನು ಜೈಲಿನಲ್ಲಿ ಬಂಧಿಮಾಡುತ್ತಾನೆ, ಅದರಂತೆ ಈ ಜೋಡಿಗಳು ಮೊದಲ ೬ ಮಕ್ಕಳನ್ನು ಕಂಸನಿಗೆ ಒಪ್ಪಿಸುತ್ತಾರೆ ಅವನು ಮಕ್ಕಳನ್ನು ಸಾಯಿಸುತ್ತಾನೆ.ನಂತರ ಹುಟ್ಟುವ ಮಗುವೆ ಅಂದರೆ ೭ನೇಯ ಮಗು ಬಲರಾಮನಾಗಿರುತ್ತಾನೆ, ಪವಾಡವೆನೆಂದರೆ ಬಲರಾಮನು ವಸುದೇವನ ಮೊದಲ ಹೆಂಡತಿ ರೋಹಿನಿಯ ಗರ್ಭದಲ್ಲಿ ಬೆಳೆಯುತ್ತಾನೆ.

ಮಹಾವಿಷ್ಣುವು ದೇವಕಿ ಹಾಗು ವಸುದೇವನಿಗೆ ಒಂದು ದಿವ್ಯ ಸಂಕೇತವನ್ನು ನೀಡುತ್ತಾರೆ ಅದು ಏನೆಂದರೆ ತಾನು ನಿಮ್ಮ ಗರ್ಭದಲ್ಲಿ ಶ್ರೀಕೃಷ್ಣನ ಅವತಾರದಲ್ಲಿ ಜನಿಸಲಿದ್ದು ಕಂಸನನ್ನು ಕೊಲ್ಲುವುದಾಗಿ ಹೇಳುತ್ತಾರೆ. ಇದರಿಂದ ಅವರು ಸಂತೋಷಗೊಳ್ಳುತ್ತಾರೆ. ಈ ಪ್ರಕಾರವಾಗಿ ಶ್ರೀಕೃಷ್ಣನ ಜನನವಾಗುತ್ತದೆ.
ಮಥುರಾದಲ್ಲಿ ವಿಷೇಶವಾಗಿ ಆಚರಣೆ: ಶ್ರೀಕೃಷ್ಣನ ಜನ್ಮ ಸ್ಠಳವಾದ ವಿಶೇಷವಾಗಿ ಹರಿಪುರ ಮತ್ತು Mathura ವೃಂದಾವನದಲ್ಲಿ ಆಚರಿಸುತ್ತಾರೆ ಏಕೆಂದರೆ ಶ್ರೀಕೃಷ್ಣನ ಇಲ್ಲಿ ತಮ್ಮ ಬಾಲ್ಯವನ್ನು ಮತ್ತು ಪ್ರಾಯವನ್ನು ಕಳೆದಿದ್ದಾರೆ.ಈ ದಿನದಲ್ಲಿ ಭಕ್ತರು ಪ್ರಾತಃಕಾಲದಿಂದ ಮಧ್ಯರಾತ್ರಿಯವರೆಗು ಉಪವಾಸವಿದ್ದು, ಬಾಲ ಕೃಷ್ಣನ ವಿಗ್ರಹವನ್ನು ನೀರಿನಲ್ಲಿ ಮತ್ತು ಹಾಲಿನಲ್ಲಿ ನೆನಸಿ ಶುಚಿಗೊಳಿಸಿ ಹೂವಿನಿಂದ ಅಲಂಕಾರ ಮಾಡಿ ಹೊಸ ಬಟ್ಟೆಯನ್ನು ತೊಡಿಸಿ ಪೂಜಿಸಿತ್ತಾರೆ.ನಂತರ ಭಕ್ತವೃಂದಕ್ಕೆ ಪ್ರಸಾದವನ್ನು ಹಂಚಿ ತಮ್ಮ ಉಪವಾಸವನ್ನು ಕೊನೆಮಾಡುತ್ತಾರೆ.

ಯಾವಾಗ ಆಚರಣೆ: ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಬರುವ ಶನಿವಾರ ಅಂದರೆ 16/08/2025 ರಂದು ಆಚರಣೆಮಾಡಲು ಸಿಧ್ಧತೆ ಮಾಡಿಕೊಳ್ಳಲಾಗಿದೆ.ಕೆಲವು ಕಡೆ ಭಾನುವಾರವೆಂದು ಗೊಂದಲ ಮಾಡಿಕೊಳ್ಳಲಾಗಿದೆ ಆದರೆ ಶನಿವಾರವೇ ಜನ್ಮಾಷ್ಟಮಿ ಆಗಿದೆ, ಈ ವಿಚಾರದಲ್ಲಿ ಯಾರು ಗೊಂದಲ ಮಾಡಿಕೋಳ್ಳುವುದು ಬೇಡ. ನೀವು ಕೊಡ ಆಚರಿಸಲು ಸಕಲ ಸಿದ್ದರಾಗಿ ಮತ್ತು ಭಗವಾನ್ ಶ್ರೀಕೃಷ್ಣನ ಕೃಪೆಗೆ ಪಾತ್ರರಾಗಿ.
“The soul can never be cut to pieces by any weapon, nor burned by fire, nor moistened by water, nor withered by the wind.” – Lord Krishna, Bhagavad Gita